ನಮ್ಮ ಈ ದೇಹವೇ ಪ್ರಕೃತಿಯಾಗಿದೆ. ಹಾಗೂ ನಮ್ಮ ಮನಸ್ಸೇ ಸತ್ಯ ಹಾಗೂ ಕಲ್ಕಿ ಅಥವಾ ಪಾಪ ಪುಣ್ಯ ಸುಳ್ಳು ಸತ್ಯ..
ಎಲ್ಲರ ಮನಸ್ಸಿನ ಒಳಗೂ ಒಳ್ಳೆಯ ಸತ್ಯ ಹಾಗೂ ಕೆಟ್ಟ ಕಲ್ಕಿಯ ಯೋಚನೆಗಳಿವೆ, ಹಾಗೂ ಅವುಗಳೇ ನಮ್ಮ ದೇಹವೆಂಬ ಪ್ರಕೃತಿಯನ್ನು ಹೇಗೆ ಬೇಕೋ ಹಾಗೇ ಉಪಯೋಗಿಸಿಕೊಳ್ಳುತ್ತವೆ, ನಮ್ಮ ಮನಸ್ಸೆಂಬ ನಾಯಕ ಹೇಗೆ ಆಡಿಸುತ್ತಾನೆ ಹಾಗೇ ನಮ್ಮ ದೇಹವೆಂಬ ಪ್ರಕೃತಿ ಆಡುತ್ತಿದೆ..
ಈ ದೇಹವು ಪಂಚಭೂತಗಳಿಂದ ಆಗಿದೆ ಹಾಗೂ ಆ ಪಂಚಭೂತಗಳೇ ಪ್ರಕೃತಿ ಹಾಗಾಗಿ ನಮ್ಮ ದೇಹ ಬೇರೆಯಲ್ಲ ಪ್ರಕೃತಿ ಬೇರೆಯಲ್ಲ..
ನಮ್ಮ ಮನಸ್ಸಿನ ಪ್ರಪಂಚದಲ್ಲಿ ಕೆಟ್ಟ ಕಲ್ಕಿಯ ಆಡಳಿತವೇ ಮೇಲುಗೈ ಆಗಿದ್ದರೆ ನಮ್ಮ ದೇಹವೆಂಬ ಪ್ರಕೃತಿಯು ಕೆಟ್ಟ ದಾರಿಯಲ್ಲಿಯೇ ಸಾಗಿ ಅದಕ್ಕೆ ನಿರಂತರ ಅತ್ಯಾಚಾರ ನಡೆಯುತ್ತಲೇ ಇರುತ್ತದೆ..
ನಮ್ಮ ಯೋಚನೆಗಳಿಂದ ನಮ್ಮನ್ನು ನಾವೇ ಅತ್ಯಾಚಾರ ಮಾಡುತ್ತಿದ್ದೇವೆ..
ಈ ಕೆಟ್ಟ ಕಲ್ಕಿಗೆ ಆರು ಅರಿಷಡ್ವರ್ಗಗಳೆಂಬ ಅಸ್ತ್ರಗಳಿವೆ ಅವುಗಳೆ ನಮ್ಮ ದೇಹವೆಂಬ ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ ಮಾಡುತ್ತವೆ, ಹಾಗಾಗಿ ನಾವು ಕತ್ತಲೆಯಿಂದ ಹೊರಬರಲಾಗುವುದೇ ಇಲ್ಲ, ಹಾಗೂ ನಮಗೆ ಬೆಳಕೆಂಬ ಸತ್ಯದ ಅರಿವು ಆಗುವುದೇ ಇಲ್ಲ..
ಇನ್ನೂ ಸಿನಿಮಾದಲ್ಲಿ ಉಪನಿಷತ್ ನ ವಾಕ್ಯವಾದ ಪರೋಪಕಾರಿ ಇಧಂ ಶರೀರಂ ಎಂಬ ವಾಕ್ಯವನ್ನು ಸಹ ಹೇಳಿದ್ದಾರೆ..
ಇದರ ಅರ್ಥ ಈ ಶರೀರ ಇರುವುದು ನಮಗಾಗಿ ಅಲ್ಲ ಇತತರಿಗೆ ಸಹಾಯ ಮಾಡಲು ಅಥವಾ ತ್ಯಾಗ ಮಾಡಲು ಎಂಬುದಾಗಿದೆ..
ಹಾಗಾಗಿ ನಾವು ನಮ್ಮ ಪ್ರಕೃತಿಯ ದೇಹದಿಂದ ಪ್ರಕೃತಿಗೆಯೇ ಸಹಾಯ ಮಾಡಬೇಕಾಗಿದೆ, ನಮಗೆ ದೇಹ ಕೊಟ್ಟಿದ್ದು ಸಹ ಪ್ರಕೃತಿ ಹಾಗೂ ನಮ್ಮ ದೇಹವೂ ಸಹ ಪ್ರಕೃತಿ ಹಾಗಾಗಿ ನಾವು ನಿರಂತರವಾಗಿ ಸತ್ಯದ ಮಾರ್ಗದಲ್ಲಿ ಸಾಗಿ ಇನ್ನೊಬ್ಬರಿಗೆ ಬೆಳಕಾಗಿ ಇರಬೇಕು ಅದೇ ಈ ಜೀವನದ ಉದ್ದೇಶ..
ಇಲ್ಲಿ ಸತ್ಯ ಹಾಗೂ ಕಲ್ಕಿ ಇಬ್ಬರಲ್ಲ ಒಬ್ಬರೇ ಅದು ಸಹ ಅವರಿಬ್ಬರೂ ನಮ್ಮ ಮನಸ್ಸಿನಲ್ಲಿದ್ದಾರೆ..
ಸತ್ಯವೂ ನಿರಂತರವಾಗಿ ನಮ್ಮ ದೇಹವನ್ನು ಒಳ್ಳೆಯ ದಾರಿಯಲ್ಲಿ ಸಾಗಿಸಲು ಪ್ರಯತ್ನಿಸಿದರೆ ಈ ಕೆಟ್ಟ ಕಲ್ಕಿಯೆಂಬ ಅರಿಷಡ್ವರ್ಗವು ಸತ್ಯವನ್ನು ಬಂಧಿಸಿ ತಾನು ದೇಹವೆಂಬ ಪ್ರಕೃತಿ ಅಥವಾ ರಾಜ್ಯವನ್ನು ಆಡಳಿತ ಮಾಡುತ್ತದೆ, ಹಾಗೂ ಸತ್ಯವೂ ಹೇಗಾದರೂ ಮಾಡಿ ಈ ದೇಹವೆಂಬ ಪ್ರಕೃತಿಯನ್ನು ಕಾಪಾಡಬೇಕೆಂದು, ಬಂಧನದಿಂದ ಮುಕ್ತವಾಗಲು ಪ್ರಯತ್ನ ಪಡುತ್ತಾ ಇರುತ್ತದೆ…
ಇಲ್ಲಿ ಸ್ವಾರ್ಥದ ಬಗ್ಗೆಯೂ ಹೇಳಿದ್ದಾರೆ.
ಒಟ್ಟಾರೆ ಜನರಿಗೆ ಪ್ರಪಂಚದ ಅಥವಾ ಇನ್ನೊಬ್ಬರ ಒಳಿತು ಬೇಕಾಗಿಲ್ಲ ತಾನು ಹಾಗೂ ತನ್ನವರಿಗೆ ಒಳಿತಾದರೆ ಸಾಕು ಎನ್ನುವ ಸ್ವಾರ್ಥ, ಹಾಗಾಗಿ ಅವರು ಇನ್ನೊಬ್ಬರು ಕಷ್ಟದಲ್ಲಿದ್ದರೂ ಸಹ ನೋಡಿಕೊಂಡು ಸುಮ್ಮನಿರುತ್ತಾರೆ. ಈ ನಿಸ್ವಾರ್ಥದ ಗುಣ ಎಲ್ಲಿಂದ ಬರಬೇಕು? ಅದು ಸಹ ನಮ್ಮ ಮನಸ್ಸಿನಲ್ಲಿದೆ ಅದೇ ಸತ್ಯ ಆದರೆ ಆ ಸತ್ಯ ಹೊರಬರಲು ಈ ಕೆಟ್ಟ ಕಲ್ಕಿ ಎನ್ನುವ ದುರುಳ ಬಿಡುತ್ತಿಲ್ಲ ಇದೇ ಈ ಕಥೆಯ ರಹಸ್ಯವಾಗಿದೆ…
ಇನ್ನೂ ಕಥೆಯಲ್ಲಿ ಬಂಧಿತನಾಗಿದ್ದ ಸತ್ಯನು ತಪ್ಪಿಸಿಕೊಂಡು ಹೊರಬಂದ ನಂತರ ಅಲ್ಲೊಂದು ವಿದ್ಯುತ್ ನ ದಾರಿಯಿತ್ತು ಅದರ ಹತ್ತಿರ ಹೋಗುವಾಗಿ ಅವನಿಗೆ ಪಕ್ಕದಲ್ಲಿರುವವರೆಲ್ಲಾ ಹೇಳುತ್ತಾರೆ ಮುಂದೆ ಹೋಗಬೇಡ ಎಂದು..
ಇದರಿಂದ ನಾವು ಹಲವಾರು ಪಾಠ ಕಲಿಯಬಹುದು, ಇತ್ತಿಚಿನ ದಿನಗಳಲ್ಲಿ ದಿನಗಳಲ್ಲಿ ಯಾರಾದರೂ ಒಳ್ಳೆಯ ಮಾರ್ಗದಲ್ಲಿ ಸಾಗುತ್ತಿದ್ದರೆ ಅವರನ್ನು ತಡೆಯುವವರೇ ಹೆಚ್ಚು! ಭಯ ಪಡಿಸುವವರೇ ಹೆಚ್ಚು! ಮುಂದೆ ಸಾಗುವವನ ಒಳಿತು ಮಾಡುವವನ ಮನಸ್ಸನ್ನು ಇಲ್ಲ ಸಲ್ಲದ ರೀತಿಯಲ್ಲಿ ಕೆಡಿಸಿ ಅವನನ್ನು ದುರ್ಮಾರ್ಗದಲ್ಲಿ ಸಾಗುವ ಹಾಗೇ ಮಾಡುತ್ತಾರೆ. ಇದಕ್ಕೆ ಕಾರಣ ಅಸೂಯೆ ಅಥವಾ ಅಜ್ಞಾನ ಆಗಿರುತ್ತದೆ.
ಹಾಗೆಯೇ ಮುಂದೆ ಬಂದ ನಂತರ ಸತ್ಯ ಹೇಳುತ್ತಾನೆ. ಇವರನ್ನು ಯಾರು ಸಹ ಬಿಡುಗಡೆ ಮಾಡಲು ಆಗುವುದಿಲ್ಲ ಇವರು ಇವರ ಬುದ್ದಿ ಶಕ್ತಿಯಿಂದಲೇ ಬಿಡುಗಡೆ ಆಗಬೇಕು ಎಂದು..
ನಾವು ನಮ್ಮ ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳೆಂಬ ಬಂಧನದಿಂದ ಯಾರು ಸಹ ಬಿಡುಗಡೆ ಮಾಡಲಾಗುವುದಿಲ್ಲ ಆ ಕಾರಾಗೃಹಕ್ಕೆ ಹೊರಗೆ ಯಾವುದೇ ಕೀ ಇಲ್ಲ ಅದು ನಮ್ಮ ಮನಸ್ಸಿನಲ್ಲಿಯೇ ಇದೆ ಅದನ್ನು ನಾವೇ ಹುಡುಕಬೇಕಾಗಿದೆ ಅದು ಸಹ ನಮ್ಮ ಬುದ್ದಿ ಶಕ್ತಿಯಿಂದ ಹುಡುಕಬೇಕಾಗಿದೆ ಆಗ ಸತ್ಯನ ದರ್ಶನವಾಗುತ್ತದೆ ಹಾಗೂ ಕಲ್ಕಿಯ ನಾಶವಾಗುತ್ತದೆ…
ಇನ್ನೂ ಈ ದುಷ್ಚಟಗಳು, ಸ್ವಾರ್ಥ ರಾಜಕೀಯ ನಾಯಕರ ಆಯ್ಕೆ, ಮೊಬೈಲ್ ಆಕರ್ಷಿತ ಆಗಿರುವುದು ಮೂಡನಂಬಿಕೆ, ಇವೆಲ್ಲವೂ ನಮ್ಮ ಮನಸ್ಸಿನ ದೌರ್ಭಲ್ಯದಿಂದಲೇ ಆಗಿದೆ ಇದನ್ನು ಸೃಷ್ಟಿಸಿದವರು ನಾವೇ ಆಗಿದ್ದೇವೆ, ಇದರಿಂದ ಒಂದು ದಿನ ನಮಗೆ ಊಟಕ್ಕೂ ಗತಿ ಇಲ್ಲದ ಸ್ಥಿತಿ ಬರಬಹುದು ಎಂದೂ ಸಹ ಹೇಳಿದ್ದಾರೆ.. ಇದೆಲ್ಲದ್ದಕ್ಕೂ ಕಾರಣ ನಮ್ಮ ಅಜ್ಞಾನವಾಗಿದೆ.. ಸ್ವಲ್ಪ ಯೋಚಿಸಿದಾಗ ನಮಗೆ ಸತ್ಯದ ಅರಿವಾಗುತ್ತದೆ..