
ಇವರಿಗೆ,
ಅವಳು ಬಹುಭಾಷ ಚಿತ್ರಕ್ಕೆ ಆಯ್ಕೆಯಾದ ಕಲಾವಿದರಿಗೆ
ವಿಷಯ: ನಮ್ಮ ಸಂಸ್ಥೆಯಿಂದ ಕೋ ಆಪರೇಟಿವ್ ಪದ್ದತ್ತಿಯಲ್ಲಿ ನಿರ್ಮಿಸುತ್ತಿರುವ ಅವಳು ಬಹುಭಾಷಾ ಡಾಕುಮೆಂಟರಿ ಚಲನಚಿತ್ರ ಅವಾರ್ಡ್ ನಿಮಿತ್ತವಾಗಿ ನಿರ್ಮಿಸುತ್ತಿದ್ದು ಶಿಗ್ರದಲ್ಲಿಯೇ ಚಿತ್ರದ ಚಿತ್ರೀಕರಣ ನಡೆಯಲಿದ್ದು ಚಿತ್ರೀಕರಣ ಪೂರ್ವ ಚಿತ್ರದ ಪಾತ್ರಗಳ ಪೋಟೋ ಶೂಟ್ ಕಾರ್ಯವನ್ನು ಫೆಬ್ರುವರಿ 22 ಹಾಗೂ 23 ನೆಯ ತಾಯಿಕಿನಂದು ಗದಗ ನಗರದ ಮಹರ್ಷಿ ವಾಲ್ಮಿಕಿ ಭವನದಲ್ಲಿ ನಡೆಸಲಿದ್ದೇವೆ.
ಈಗಾಗಲೇ ತಾವು ಕಲಾವಿದರ ಆಯ್ಕೆ ಸಂದರ್ಶನಕ್ಕೆ ಹಾಜರಾಗಿ ಆಯ್ಕೆ ಆಗಿದ್ದು ತಮ್ಮ ಆಯ್ಕೆಯ ಅನುಗುಣವಾಗಿ ಅವಳು ಚಲನಚಿತ್ರದ ಪಾತ್ರಗಳಿಗೆ ತಕ್ಕಂತೆ ತಮ್ಮ ಪಾತ್ರಗಳನ್ನು ಅಳವಡಿಸಲಾಗಿದ್ದು ಪೋಟೋ ಶೂಟ್ ನಂತರ ತಮ್ಮ ಪಾತ್ರಗಳ ಅಂತಿಮ ರೂಪವನ್ನು ನಿಗದಿ ಪಡಿಸಿ ಆಯ್ಕೆಯ ಪಾತ್ರದ ಪ್ರಮಾಣಪತ್ರ ನೀಡಲಾಗುವುದು.
ಈಗಾಗಲೇ ತಮಗೆ ತಿಳಿಯ ಪಡಿಸಿದ ಹಾಗೆ ಚಿತ್ರವನ್ನು ಕನ್ನಡ ಹಿಂದಿ ತೆಲುಗು ತಮಿಳು ಮಳಿಯಾಳಂ ಹೀಗೆ ಐದು ಭಾಷೆಗಳಲ್ಲಿ ಭಾಷಾಂತರ ಮಾಡಿ ಬಿಡುಗಡೆ ಮಾಡಲಿದ್ದು ಮೊದಲಿಗೆ ಕನ್ನಡ ಭಾಷೆಯಲ್ಲಿ ಬಿಡುಗಡೆ ಗೊಳಿಸಲು ತಿರ್ಮಾನಿಸಿದೆ. ಹಾಗೂ ಚಿತ್ರಕ್ಕೆ ಸಿಗುವ ಅವಾರ್ಡ್ ಗಳಿಗೆ ಚಿತ್ರದ ಸರ್ವ ಷೇರುದಾರರು ಭಾಗಿಗಳಾಗಿದ್ದಾರೆ
ಅವಳು ಅವಾರ್ಡ್ ಚಲನಚಿತ್ರವು ಅತ್ಯಂತ ಕಡಿಮೆ ಬಂಡವಾಳ ಹೂಡಿಕೆಯ ಚಿತ್ರವಾಗಿದ್ದು ಐದು ಜನ ಮಹಿಳೆಯರ ವಿಭಿನ್ನ ಕಥೆಯುಳ್ಳ ವಿಶೇಷ ಚಿತ್ರವಾಗಿದೆ ಹಾಗೂ ಚಿತ್ರವನ್ನು ಅವಾರ್ಡ್ ನಿಮಿತ್ತ ನಿರ್ಮಿಸುತ್ತಿದ್ದು ಚಿತ್ರದಲ್ಲಿ ಬಹುತೇಕ ಪಾತ್ರಗಳು ಮೇಕಪ್ ರಹಿತ ಪಾತ್ರಗಳು ಆಗಿರುತ್ತವೆ ಹಾಗೂ ಚಿತ್ರದಲ್ಲಿ ಉಪಯೋಗಿಸುವ ಉಡುಪುಗಳು ಸಾಮಾನ್ಯವಾಗಿ ಮನೆಗಳಲ್ಲಿ ಉಪಯೋಗಿಸುವ ಉಡುಪುಗಳು ಆಗಿರುತ್ತವೆ, ಚಿತ್ರದಲ್ಲಿ ಪೋಲಿಸ್ ಹಾಗೂ ಇತರೆ ವಿಶೇಷ ಪಾತ್ರಗಳಿಗೆ ಉಪಯೋಗಿಸುವ ಉಡುಪುಗಳು ಸಂಸ್ಥೆ ನೀಡುತ್ತದೆ ಹಾಗೂ ಇತರೆ ಸರ್ವ ಪಾತ್ರಗಳಿಗೆ ಉಡುಪುಗಳು ಸಾಮಾನ್ಯವಾಗಿರುತ್ತವೆ, ಕಾರಣ ಚಿತ್ರೀಕರಣಕ್ಕೆ ಉಪಯಿಗಿಸುವ CASTUM ಗಳನ್ನು ತಾವೇ ತಮ್ಮಲ್ಲಿ ಇರುವ ಒಳ್ಳೆಯ CASTUM ಗಳನ್ನು ಪೋಟೋ ಶೂಟ್ ದಿನದಂದು ಜೊತೆಗೆ ತರಬೇಕಾಗುತ್ತದೆ,
ಚಿತ್ರದಲ್ಲಿ 5 ಜನ ನಾಯಕಿಯರಿದ್ದು ನಾಯಕಿಯರ ಪಾತ್ರಗಳು ಸೀರೆಯಲ್ಲಿ ಕಾಣಿಸಿಕೊಳ್ಳಲಿದೆ, ವಿಶೇಷ ಪಾತ್ರವು ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ, ನಾಯಕಿಯ ಮಗಳ ಹಾಗೂ ಮಗನ ಪಾತ್ರಗಳು ಸಾಮಾನ್ಯವಾಗಿ ದಿನಂಪ್ರತಿ ಉಪಯೋಗಿಸುವ ಉಡುಪುಗಳಲ್ಲಿ ಕಾಣಿಸಿಕೊಳ್ಳಲಿದ್ದು, ಪುರುಷ ಪಾತ್ರಗಳು ಸಹ ಪೋಲಿಸ್ ಪಾತ್ರ ಹೊರತುಪಡಿಸಿ ಉಳಿದ ಪಾತ್ರಗಳು ಸಾಮಾನ್ಯವಾಗಿ ದಿನಂಪ್ರತಿ ಉಡುವ ಸಾಮಾನ್ಯ ಉಡುಗೆಗಳಲ್ಲಿ ಕಾಣಿಸಿಕೊಳ್ಳಲಿದೆ, ಚಿತ್ರದಲ್ಲಿ ಬರುವ ಮಾಟಗಾರರು, ವಿಲನ್, ಇಂತಹ ವಿಶೇಷ ಪಾತ್ರಗಳ ಉಡುಪುಗಳು ಸಂಸ್ಥೆಯಲ್ಲಿ ಲಬ್ಯವಿರುತ್ತದೆ, ಚಿತ್ರದ ಮಕ್ಕಳ ಪಾತ್ರಗಳಿಗೆ ಮಕ್ಕಳು ಸಾಮಾನ್ಯವಾಗಿ ದಿನಂಪ್ರತಿ ಉಪಯೋಗಿಸುವ ಸಾಮಾನ್ಯ ಉಡುಪುಗಳನ್ನು ಉಪಯೋಗಿಸಬಹುದಾಗಿದೆ,
ಪೋಟೋ ಶೂಟ್ ದಿನದಂದು ಕನಿಷ್ಠ 5 ಜೊತೆ ಗರಿಷ್ಟ 10 ಜೊತೆ ಬಟ್ಟೆಗಳನ್ನು ತರಬೇಕು ಹಾಗೂ ಪೋಟೋ ಶೂಟ್ ನಲ್ಲಿ ಅಂತಿಮವಾಗಿ ಆಯ್ಕೆ ಆಗುವ ಬಟ್ಟೆಗಳನ್ನು ಪಾತ್ರಗಳ ಚಿತ್ರೀಕರಣಕ್ಕಾಗಿ ಪ್ರತ್ಯೇಕಿಸಿ ತೆಗೆಡಿಡಲು ಸ್ತಳಾವಕಾಶ ಇರುತ್ತದೆ.
ಚಿತ್ರೀಕರಣ ಸಮಯದಲ್ಲಿ ಮಹಿಳಾ ವಿಭಾಗ ಹಾಗೂ ಪುರುಷ ವಿಭಾಗಗಳ ವಸತಿಯು ಪ್ರತ್ಯೇಕವಾಗಿ ಸ್ಥಾಪಿಸಲಾಗಿದ್ದು ಚಿತ್ರೀಕರಣ ಸಮಯದಲ್ಲಿ ಬೆಳಗಿನ ಉಪಹಾರ ಮದ್ಯಾಹ್ನದ ಹಾಗೂ ರಾತ್ರಿಯ ಸಾಮಾನ್ಯ ಊಟವನ್ನು ಸಂಸ್ಥೆ ವ್ಯವಸ್ಥೆ ಮಾಡಿರುತ್ತದೆ. ಚಿತ್ರೀಕರಣ ಸ್ಥಳಕ್ಕೆ ತೆರಳಲು ವಾಹನದ ವ್ಯವಸ್ಥೆ ಇದ್ದು ಚಿತ್ರೀಕರಣದ ಶೆಡ್ಯೂಲ್ ನಂತೆ ಕಲಾವಿದರು ಚಿತ್ರೀಕರಣಕ್ಕೆ ಲಬ್ಯವಿರಬೇಕು. ವಸತಿ ಸಮಯದಲ್ಲಿ ದಿನದ ಅವಶ್ಯಕತೆ ಗಳಿಗೆ ಬೇಕಾದ ಹಾಸಿಗೆ ದಿಂಬು ಸೋಪ್ ಪೇಸ್ಟ್ ಗಳನ್ನೂ ತಾವು ತಮ್ಮ ಸ್ವಂತವಾಗಿ ನಿರ್ವಹಿಸಿಕೊಳ್ಳಬೇಕು, ಚಿತ್ರವು ಮೇಕಪ್ ರಹಿತ ಚಿತ್ರವಾಗಿದ್ದು ತಾವು ದಿನಂಪ್ರತಿ ಉಪಯೋಗಿಸುವ ಮೇಕಪ್ ಸಾಧನಗಳು ಸಂಸ್ಥೆಯಲ್ಲಿ ಲಬ್ಯ ಇರುವುದಿಲ್ಲ, ವಿಶೇಷ ಸಮಯದಲ್ಲಿ ಚಿತ್ರದ ಹಾಡುಗಳಿಗೆ ಹಾಗೂ ವಿಶೇಷ ಪಾತ್ರಗಳಿಗೆ ಮಾತ್ರ ಸಂಸ್ಥೆ ಮೇಕಪ್ ಅಳವಡಿಸುತ್ತದೆ.
ಚಿತ್ರದಲ್ಲಿ ಬಾಲಕ ಬಾಲಕಿಯರ ಪಾತ್ರಗಲಿದ್ದು ಆಯಾ ಪಾತ್ರಗಳ ಜೊತೆ ಬರುವ ಪಾಲಕರು ತಮ್ಮ ಖರ್ಚು ವೆಚ್ಚಗಳನ್ನು ತಾವೇ ಭಾರಿಸಿಕೊಳ್ಳಬೇಕು ಸಾಮಾನ್ಯವಾಗಿ ಪಾಲಕರು ನಮ್ಮ ಸಂಸ್ಥೆಯ ಮಹಿಳಾ ಹಾಗೂ ಪುರುಷ ಸಾಮಾನ್ಯ ವಸತಿ ವಿಭಾಗಗಳಲ್ಲಿ ವಸತಿ ಇರಬಹುದಾಗಿದೆ.
ಚಿತ್ರದ ಕೆಲವು ಪಾತ್ರಗಳು ಷೇರು ರಹಿತ ಪಾತ್ರಗಳಾಗಿದ್ದು ಅಂತಹ ಪಾತ್ರಗಳು ಚಿತ್ರದ ಯಾವುದೇ ಲಾಭಗಳಿಗೆ ಪಾತ್ರ ಇರುವುದಿಲ್ಲ ಹಾಗೂ ಅವರಿಗೆ ಸಲ್ಲಿಸಬೇಕಾದ ಗೌರವ ಧನವನ್ನು ಚಿತ್ರ ಬಿಡುಗಡೆಯ ನಂತರ ಸಲ್ಲಿಸಲಾಗುವುದು. ಚಿತ್ರದಲ್ಲಿ ಷೇರು ಅಳವಡಿಸಿದ ಸರ್ವ ಕಲಾವಿದರು ಚಿತ್ರದ ಮಾಲಿಕತ್ವದ ಹಕ್ಕನ್ನು ವುಳ್ಳವರಾಗಿದ್ದು ಅವರು ಚಿತ್ರದ ನಿರ್ಮಾಣ ಪಾಲುದಾರರು ಆಗಿರುತ್ತಾರೆ ಹಾಗೂ ಚಿತ್ರ ಬಿಡುಗಡೆ ಹೊಂದುವ ಸರ್ವ ಭಾಷೆಯ ಚಿತ್ರಗಳಿಗೆ ಹಕ್ಕುದಾರರು ಹಾಗೂ ಚಿತ್ರದ ಅವಾರ್ಡ್ ಗಳಲ್ಲಿ ಪಾಲುದಾರರು ಆಗಿರುತ್ತಾರೆ, ಚಿತ್ರದಲ್ಲಿ ಅಭಿನಯಿಸುವ ಪ್ರತಿಭೆಗಳಿಗೆ ಚಿತ್ರ ಸಂಸ್ಥೆ ಪ್ರಮಾಣಪತ್ರ ಹಾಗೂ ಆರ್ಟಿಸ್ಟ್ ಕಾರ್ಡ್ ಗಳನ್ನೂ ಪೂರೈಸಲಿದೆ ಹಾಗೂ ಆರ್ಟಿಸ್ಟ್ ಕಾರ್ಡ್ ನೊಂದಿಗೆ ನಮ್ಮ ಘನ ಸರಕಾರದ ಇಲಾಖೆಗಳಲ್ಲಿ ಅವರು ಕಲಾವಿದರು ಎಂದು ಪರಿಗಣನೆ ಮಾಡಿಕೊಳ್ಳಲು ಮಾನ್ಯ ಸರಕಾರಕ್ಕೆ ಕಲಾವಿದರ ಪರವಾಗಿ ಪತ್ರವನ್ನು ಸಲ್ಲಿಸುತ್ತದೆ.
ಕೋ ಆಪರೇಟಿವ್ ಪದ್ದತ್ತಿಯಲ್ಲಿ ನಿರ್ಮಿಸುತ್ತಿರುವ ನಮ್ಮ ಸಂಸ್ಥೆಯ ಮೊದಲನೆಯ ಚಿತ್ರದ ಒಟ್ಟು 1000 ಷೇರು ಗಳಲ್ಲಿ ಸಂಸ್ಥೆ 500 ಷೇರುಗಳನ್ನು ಭರಿಸಿದ್ದು ಇನ್ನುಳಿದ 500 ಷೇರುಗಳನ್ನು ಕಲಾವಿದರು ಹಾಗೂ ಇತರರು ಮಾರಟಕ್ಕೆ ಪಡೆದುಕೊಂಡಿದ್ದು ಇರುತ್ತದೆ. ನಮ್ಮ ಸಂಸ್ಥೆಯ ಸದಸ್ಯರು ಹಾಗೂ ಅವಳು ಚಲನಚಿತ್ರದ ಷೇರುದಾರರು ಆದ ತಾವು ತಮ್ಮ ಸಂದರ್ಶನ ಸಮಯದಲ್ಲಿ ಪಡೆದುಕೊಂಡ ಷೇರು ಸಂಖ್ಯೆ ಅನ್ವಯ ಷೇರು ಮೊತ್ತವನ್ನು ನಮ್ಮ ಕಚೇರಿಯಲ್ಲಿ ಭರಿಸಿ ಅದರ ಷೇರು ಪ್ರಮಾಣಪತ್ರ ಷೇರು ಧ್ರುಡಿಕರಣ ಪತ್ರಗಳನ್ನು ಪಡೆದುಕೊಳ್ಳಬೇಕು. ಈಗಾಗಲೇ ತಮಗೆ ತಿಳಿಸಿದ ಹಾಗೆ ಅವಳು ಚಿತ್ರದ ಷೇರು ಲಾಭಗಳು ಜಿವಿತಾವದಿ ಹಾಗೂ ಎರಡು ತಲೆಮಾರುಗಳ ವರೆಗೂ ಇದ್ದು ಷೇರು ನಾಮಿನಿ ವಿವರಗಳನ್ನು ತಪ್ಪದೆ ಷೇರು ಪ್ರಮಾಣಪತ್ರದಲ್ಲಿ ಧಾಕಲಿಸಬೇಕು. ಕಲಾವಿದರ ಆರ್ಥಿಕ ಪರಿಸ್ಥಿತಿಯ ಅನ್ವಯ ಷೇರು ಮೊತ್ತವನ್ನು ಹಂತ ಹಂತವಾಗಿ ಚಿತ್ರೀಕರಣ ಸಮಯದಲ್ಲಿ ಪಾವತಿಸುವ ವ್ಯವಸ್ಥೆ ಇದ್ದು ಷೇರು ಮೊತ್ತದ 50% ಅನ್ನು ಪಾವತಿಸಿ ಇನ್ನು 50% ಅನ್ನು ಬಾಕಿ ಉಳಿಸಿ ಚಿತ್ರಿಕರಣ ಸಮಯದಲ್ಲಿ ಪಾವತಿಸಬಹುದಾಗಿದೆ.
ವಿಶೇಷ ಸೂಚನೆ:
* ಬರುವ ಕಲಾವಿದರು ತಮ್ಮ ಆದಾರ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳನ್ನು ಜೊತೆಗೆ ತರಬೇಕು
* ಕಲಾವಿದರ ಜೊತೆ ಬರುವ ಸಂಬಂದಿಕರು ತಾವು ಸಂಬಂದಿಕರು ಎಂಬ ಕುರಿತು ಪುರಾವೆಗಳನ್ನು ಜೊತೆಗೆ ತರಬೇಕು
* ಬಾಲ ಕಲಾವಿದರ ಜೊತೆ ಬರುವ ಪಾಲಕರು ತಾವು ಪಾಕಲರು ಎಂಬ ಕುರಿತು ಪುರಾವೆಯನ್ನು ಜೊತೆಗೆ ತರಬೇಕು
* ಚಿತ್ರೀಕರಣ ಸಮಯದಲ್ಲಿ ಯಾವುದೇ ಸಂಬಂದಿಕರು, ಪಾಲಕರು ಇತ್ಯಾದಿಗಳಿಗೆ ಚಿತ್ರೀಕರಣ ಸೆಟ್ ನಲ್ಲಿ ಪ್ರವೇಶ ನಿಶಿದ್ದ
* ಚಿತ್ರೀಕರಣ ಸಮಯದಲ್ಲಿ ಆಗುವ ಯಾವುದ್ದೆ ವಿಷಗಳಿಗೆ ಮೊದಲು ಚಿತ್ರ ನಿರ್ಮಾಪಕರ, ನಿರ್ದೇಶಕರ ಗಮನಕ್ಕೆ ತರಬೇಕು
* ಸಂಸ್ಥೆ ಕಾಲಕಾಲಕ್ಕೆ ಹೊರಡಿಸುವ ನಿಯಮಗಳಿಗೆ ಸರ್ವ ಕಲಾವಿದರು, ಪಾಲಕರು ಭದ್ದರಿರಬೇಕು.