ರಾಗಿಯಾದ ಗಿರೀಶ


ಚಿತ್ರದುರ್ಗದ ಜಮುರಾ ತಂಡಕ್ಕೆ, ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು, ಕೂಟಗಲ್ಲ್ ಹೋಬಳಿಯ, ಶ್ಯಾನುಭೋಗನಹಳ್ಳಿಯಿಂದ ಒಬ್ಬ ಯುವಕ ಬರುತ್ತಾನೆ….
ಆತ 7ನೇ ತರಗತಿಯಲ್ಲಿರುವಾಗಲೇ, ತನ್ನೂರಾದ ಶ್ಯಾನುಭೋಗನಹಳ್ಳಿಯ ಶಾಲಾ ಶಿಕ್ಷಕಿಯಾದ ರೇಣುಕಮ್ಮನವರು, ರಚಿಸಿ ನಿರ್ದೇಶಿಸಿದ “ವರದಕ್ಷಿಣೆ ” ಎಂಬ ಕಿರು ನಾಟಕದಲ್ಲಿ ಮುಖ್ಯ ಪಾತ್ರಧಾರಿಯಾಗಿ, ಮತ್ತು “ರಾಯರು ಬಂದರು ಮಾವನ ಮನೆಗೆ” ಎಂಬ ಚಲನಚಿತ್ರದ “ಅಡವಿ ದೇವಿಯ ಕಾಡು ಜನಗಳ” ಎಂಬ ಗೀತೆಗೆ ನೃತ್ಯ ಮಾಡುವುದರ ಮೂಲಕ, ಹಾಗೂ ಆತ್ಮೀಯ ಶಿಕ್ಷಕಿಯಾದ ಸರಳ ಎಸ್ ಕೆ ಎಂಬುವರು ಕಲಿಸಿದ “ನಿನ್ನೊಲುಮೆ ನಮಗಿರಲಿ ತಂದೆ” ಹಾಡನ್ನು ಹಾಡುವ ಮೂಲಕ…

ಪಂಡಿತ್ ನೆಹರು ಪ್ರೌಢಶಾಲೆ ಕೂಟಗಲ್ ನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವಾಗ ಗಾಯನ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಏಕಪಾತ್ರ ಅಭಿನಯಕ್ಕಾಗಿ “ದ್ವಿತೀಯ ಸ್ಥಾನ” ಪ್ರಶಸ್ತಿ ಗಳಿಸುತ್ತಾರೆ. ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಅದರಲ್ಲೂ “ದ್ವಿತೀಯ ಸ್ಥಾನ” ಗಳಿಸುತ್ತಾರೆ.

ಆಗಲೇ “ಗುರುರಾಜುಲು ನಾಯ್ಡು” ರವರ “ಹರಿಕಥೆ”ಗಳನ್ನು ಕೇಳುತ್ತಾ ಕಲೆಯ ಬಗ್ಗೆ ಅತೀವವಾದ ಆಸಕ್ತಿಯನ್ನ ಹೊಂದುತ್ತಾರೆ.
ತದನಂತರ ಬೆಂಗಳೂರಿಗೆ ಬಂದು,ಅನೇಕ ಕೆಲಸಗಳನ್ನು ಹುಡುಕಿ, ಸೇರಿ ಅದರಿಂದ ತೃಪ್ತಿ ಸಿಗದಿದ್ದಾಗ,

ತಾನು ಕಲಾವಿದನಾಗಿ ಮುಂದುವರಿಯಬೇಕು ಎಂಬ ಆಶಯ ದೃಢವಾಗುತ್ತದೆ, ಅದೇ ವೇಳೆಗೆ ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆಯ ಶಿವಕುಮಾರ್ ಎಂಬ ಪೊಲೀಸ್ ಪೇದೆಯೊಬ್ಬರು, ಇವರನ್ನು ಸಿಲ್ಲಿ ಲಲ್ಲಿಯ ನಿರ್ದೇಶಕರಾದ ವಿಜಯ್ ಪ್ರಸಾದ್ ರವರಿಗೆ ಪರಿಚಯಿಸಿ 2005ರಲ್ಲಿ ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಒಂದು ಸಣ್ಣ ಪಾತ್ರ ನಿರ್ವಹಿಸುತ್ತಾರೆ,

2006ರಲ್ಲಿ ಪತ್ರಿಕೆಯೊಂದರ “ಜಮುರಾ ಸುತ್ತಾಟಕ್ಕೆ ಕಲಾವಿದರು ಬೇಕಾಗಿದ್ದಾರೆ” ಎಂಬ ಸುದ್ದಿಯನ್ನು ಓದಿ,
ಸೀದಾ ಚಿತ್ರದುರ್ಗಕ್ಕೆ ಬರುತ್ತಾರೆ ಅಲ್ಲಿ ಜಮುರಾ ಸುತ್ತಾಟ ತಂಡದ ಆಗಿನ ಮ್ಯಾನೇಜರ್ ಆಗಿದ್ದ ಏ ಜೆ ಪರಮಶಿವಯ್ಯನವರು ಇವರನ್ನು ತಂಡಕ್ಕೆ ಆಯ್ಕೆಗೊಳಿಸುತ್ತಾರೆ. ಜೊತೆಗೆ ಆ ವರ್ಷದ ನಿರ್ದೇಶಕರಾಗಿದ್ದ ಕೃಷ್ಣಮೂರ್ತಿ ಕವತ್ತಾರ್ ಇವರಿಗೆ ತಂಡದಲ್ಲಿ ಸ್ಥಾನ ನೀಡುತ್ತಾರೆ. ಜೊತೆಗೆ ಅದ್ಭುತ ಗಾಯಕರು, ಸಂಗೀತ ಶಿಕ್ಷಕರು ಆದ ತೋಟಪ್ಪ ಉತ್ತಂಗಿಯವರು, ಅದ್ಭುತ ಹಾಸ್ಯ ಕಲಾವಿದರಾದ ಹಾಲಪ್ಪ ನಾಯ್ಕ ರವರು ಕೂಡ ಇವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಹಕಾರ ನೀಡುತ್ತಾರೆ.

ಆ ವರ್ಷ ಮೊದಲ ತಂಡವಾದರೂ ಅದ್ಭುತ ಕಲಾವಿದರ ತಂಡ. ಒಬ್ಬೊಬ್ಬರು ಒಂದೊಂದು ವಿಷಯದಲ್ಲಿ ಪರಿಣಿತರು,
ಆನಂತರ ಸಾಣೇಹಳ್ಳಿಯ ಶಿವಸಂಚಾರ ದ ವ್ಯವಸ್ಥಾಪಕರಾದ ರಾಜು ಅವರು, ಇವರನ್ನು ಶಿವ ಸಂಚಾರ ತಂಡಕ್ಕೂ ಪರಿಚಯಿಸಿ, ಅಲ್ಲೂ ಕೂಡ ಒಂದು ವರ್ಷದ ಸಂಚಾರದ ಅನುಭವ ನೀಡುತ್ತಾರೆ.
ಅಲ್ಲಿಯೇ ಆರಂಭವಾಗಿದ್ದ “ಶಿವದೇಶಿ ಸಂಚಾರ” ದ ವ್ಯವಸ್ಥಾಪಕರಾಗಿದ್ದ ಹೆಚ್ಎಸ್ ದ್ಯಾಮೇಶ್ ರವರು ಕೂಡ ಎರಡು ಹಿಂದಿ ನಾಟಕದಲ್ಲಿ ಅಭಿನಯಿಸಿ, ದೇಶ ಸಂಚಾರ ಮಾಡಲು ಪ್ರೋತ್ಸಾಹ ನೀಡುತ್ತಾರೆ. ಅದೇ ತಂಡ ಗಿರೀಶ ಆಗಿದ್ದ ಹೆಸರನ್ನು “ರಾಗಿ” ಆಗಿ ಬದಲಾಯಿಸುತ್ತಾರೆ. ಹಾಗೆಯೇ ಯುವ ನಿರ್ದೇಶಕರಾದ ಕಲ್ಲಪ್ಪ ಪೂಜೇರಾ ಅವರು ತಮ್ಮ ನಾಟ್ಯ ಯೋಗ ತಂಡದಲ್ಲಿ ಇವರಿಗೆ ಅವಕಾಶ ಕಲ್ಪಿಸುತ್ತಾರೆ….
ಹೀಗೆ ಪ್ರಾರಂಭವಾದ ಇವರ ರಂಗ ಸೇವೆ ನಿರಂತರವಾಗಿ ಸಾಗುತ್ತಾ…
ಈಗ ಎರಡು ಹಿಂದಿ ನಾಟಕಗಳು ಸೇರಿ ಒಟ್ಟು 31 ನಾಟಕದಲ್ಲಿ ನಟರಾಗಿ, ತಂತ್ರಜ್ಞರಾಗಿ, ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುವಂತೆ ಮಾಡಿದೆ.

ಇದಲ್ಲದೆ ಯುವ ನಿರ್ದೇಶಕ ಮಹದೇವ ಹಡಪದ್ ಅವರ ಜೊತೆ 5 ನಾಟಕಗಳು, ಕೃಷ್ಣಮೂರ್ತಿ ಕವತ್ತಾರ್ ಅವರ ಜೊತೆ ಮೂರು ನಾಟಕ ಒಂದು ರೂಪಕ, ವೈಡಿ ಬದಾಮಿ ಅವರ ಜೊತೆ ಮೂರು ನಾಟಕಗಳು, ಮಹಾಂತೇಶ್ ರಾಮದುರ್ಗ ಅವರೊಂದಿಗೆ ನಾಲ್ಕು ನಾಟಕಗಳು, ಕಲ್ಲಪ್ಪ ಪೂಜೇರಾ ಅವರೊಂದಿಗೆ ಎರಡು ನಾಟಕಗಳು, ಅಶೋಕ್ ಬಾದರ್ದಿನ್ನಿ ಎಂಬ ಹೆಸರಾಂತ ನಿರ್ದೇಶಕರ ಜೊತೆ ಹಲವು ರೂಪಕಗಳಲ್ಲಿ, ಉಳಿದಂತೆ ಮೌನೇಶ್ ಬಡಿಗೇರ್, ಶ್ರೀಕಾಂತ್ ಎನ್,ವಿ , ಧನಂಜಯ ದಿಡಗ, ಪ್ರಕಾಶ್ ಗರುಡ, ಸಿ ಬಸವಲಿಂಗಯ್ಯ, ಯತೀಶ್ ಕೊಳ್ಳೇಗಾಲ, ಮಂಜುಳಾ ಬದಾಮಿ, ಕೆ ಜಿ ಕೃಷ್ಣಮೂರ್ತಿ, ಶಿರೀಶ್ ದೋಬಾಲ್, ಶೀಲಾ ಹಾಲ್ಕುರಿಕೆ, ಅಪ್ಪಣ್ಣ ರಾಮದುರ್ಗ, ಎಲ್ ಕೃಷ್ಣಪ್ಪ, ಕೆಪಿಎಂ ಗಣೇಶಯ್ಯ, ಮೊದಲಾದ ಅದ್ಭುತ ನಿರ್ದೇಶಕರ ಜೊತೆ, ಹಾಗೂ ಕೃಷ್ಣಮೂರ್ತಿ ಮೂಡಬಾಗಿಲು, ಚಂದ್ರಶೇಖರ ತಿಪಟೂರು, ಪ್ರಭುರಾಜ್ ಸೋಮಲಾಪುರ, ಮಾರಣ್ಣ ಬಿ ಆರ್ ಎಂಬ ಸಹಾಯಕ ನಿರ್ದೇಶಕರ ಜೊತೆಗೆ, ಮತ್ತು ರಾಮಚಂದ್ರ ಶೇರಿಕಾರ್, ಅಶೋಕ್ ತೊಟ್ನಳ್ಳಿ, ಲೇಟ್.ಮೋಹನ್ ಮೈಸೂರು ಎಂಬ ರಂಗ ಪರಿಕರ ತಯಾರಕರ ಜೊತೆಗೆ, ರಾಮಕೃಷ್ಣ ಬೆಳ್ತೂರು ಎಂಬ ಪ್ರಸಾದನ ತರಬೇತಿದಾರರ ತರಬೇತಿಯಲ್ಲಿ… ನಟರಾಗಿ, ತಂತ್ರಜ್ಞರಾಗಿ ರಂಗ ಸೇವೆ ಮಾಡಿದ್ದಾರೆ.

ಜಮುರಾ ಸುತ್ತಾಟದಲ್ಲಿ 13 ವರ್ಷ, ಶಿವ ಸಂಚಾರ ಒಂದು ವರ್ಷ, ಶಿವದೇಶಿ ಸಂಚಾರ ಒಂದು ವರ್ಷ, ನಾಟ್ಯ ಯೋಗ ತಂಡದಲ್ಲಿ ಒಂದು ವರ್ಷ ರಂಗ ಸೇವೆ ಸಲ್ಲಿಸಿರುತ್ತಾರೆ.

ಇತ್ತೀಚೆಗೆ ಕಥೆ ಕವನ ರಚಿಸುವ ಹವ್ಯಾಸ ಹೊಂದಿದ್ದು, ನಾನು ರಚಿಸಿದ ಕವಿತೆಗಳನ್ನು “ಬೆಂಗೇರಿ ಕ್ರಿಯೇಷನ್ಸ್” ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಹಾಗೂ “ಪ್ರಗತಿ ಸಾಹಿತ್ಯ ವೇದಿಕೆ ಮತ್ತು ಏ ವಿ ಕನ್ನಡ ನ್ಯೂಸ್ ಚಾನೆಲ್” ಹಾಗೂ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ-ಚಿತ್ರದುರ್ಗ, ಗಾನಯೋಗಿ ಸಾಹಿತ್ಯ ಪರಿಷತ್-ಗದಗ,ಬೆಂಗಳೂರು, ಜ್ಞಾನದೀಪಂ ದಿನಂಪ್ರತಿ ಬಳಗ-ಬಾಗಲಕೋಟೆ, ಮನಸುಗಳ ಬಾಂಧವ್ಯ ಬೆಸುಗೆ ಬಳಗ ಸ್ಪರ್ಧಾ ವೇದಿಕೆ, ಕರುನಾಡ ಹಣತೆ ಕವಿ ಬಳಗ-ಚಿತ್ರದುರ್ಗ, ಈ ವೇದಿಕೆ ಗಳು ನನ್ನ ಕವಿತೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿವೆ.
ಡಾ.ಜಿ ಎನ್ ಮಲ್ಲಿಕಾರ್ಜುನಪ್ಪನವರು ತಾವು ರಚಿಸಿದ, ನಾನು ಮುಖ್ಯ ಪಾತ್ರಧಾರಿಯಾಗಿ ( ಬಸವಣ್ಣನಾಗಿ) ಅಭಿನಯಿಸಿದ ಮಹಾಕ್ರಾಂತಿ ನಾಟಕವನ್ನು, ಚಲನಚಿತ್ರ ನಿರ್ದೇಶಕರಾದ ರಾಧಾಕೃಷ್ಣ ಪಲ್ಲಕ್ಕಿಯವರ ಪರಿಕಲ್ಪನೆಯಲ್ಲಿ ಆಡಿಯೋ ಮುಖಾಂತರ ಹೊರ ತಂದಿದ್ದಾರೆ.
ಚಲನಚಿತ್ರ ನಿರ್ದೇಶಕರಾದ “ರಾಧಾಕೃಷ್ಣ ಪಲ್ಲಕ್ಕಿ” ಅವರ “ಬರಗೂರು” “ಮದಕರಿಪುರಚಾಮಯ್ಯ s/o.ರಾಮಾಚಾರಿ ಚಲನಚಿತ್ರಗಳಲ್ಲಿ ಹಾಗೂ “ಅಮರ್ ದೇವ್”ಎಂಬ ನಿರ್ದೇಶಕರ ಜೊತೆ “ಕೊನೆಯ ನಮಸ್ಕಾರ” ಮತ್ತು “ಅಲೆಮಾರಿ ಆತ್ಮಕಥೆ” ಹಾಗೂ ಇತ್ತೀಚೆಗೆ ಮುಟ್ಟು ಎಂಬ ಕಲಾತ್ಮಕ ಚಿತ್ರಗಳಲ್ಲಿ ಹಾಗೂ ಮಹೇಶ್ ಎಂಬ ಯುವ ನಿರ್ದೇಶಕರ ಜೊತೆ “ಮುನಿಯನ ಮಾದರಿ“ಎಂಬ ಏಳು ಚಲನಚಿತ್ರಗಳಲ್ಲಿ, ಮತ್ತು ಸಿಲ್ಲಿಲಲ್ಲಿ ಹಾಗೂ ಜನನಿ ಎಂಬ ಧಾರಾವಾಹಿಗಳಲ್ಲಿ ಅಭಿನಯಿಸಿರುತ್ತಾರೆ.
ತಮ್ಮದೇ ಕಥೆ ಸಿದ್ಧಪಡಿಸಿ ಚಲನಚಿತ್ರ ವಾಗಿಸುವ ತಯಾರಿ ನಡೆಸಿರುತ್ತಾರೆ.
ಒಟ್ಟಾರೆ 18 ವರ್ಷದಿಂದ ಕಲಾಸೇವೆ ಮಾಡುತ್ತಾ ಗಿರೀಶ ಎಸ್ ಸಿ ಆಗಿದ್ದ ಇವರು ಎಲ್ಲ ಕಲಾಗೆಳೆಯರ ಪ್ರೀತಿಯ ರಾಗಿ ಆದದ್ದು ವಿಶೇಷ…
*
*ಮಾಹಿತಿ :- ಶ್ರೀಮತಿ ಜ್ಯೋತಿಗಿರೀಶ್*
ಸಂಗೀತ ಶಿಕ್ಷಕರು
ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ
ಚಿತ್ರದುರ್ಗ
9164443493

Leave a Reply

Your email address will not be published. Required fields are marked *

error: Content is protected !!