ಶೀಘ್ರದಲ್ಲಿಯೇ ಅವಳು ಪ್ಯಾನ ಇಂಡಿಯಾ ಮೂವಿ ಚಿತ್ರೀಕರಣ

🔴ಕಾರಭಾರಿ ಸಿನಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ (ಲಾಂಛನದಲ್ಲಿ)
🔴 ಕಾರಭಾರಿ ಕೂ ಆಪರೇಟಿವ್ ಫಿಲ್ಮ್ ಸೊಸೈಟಿ (ಸಹಯೋಗದಲ್ಲಿ)

ಅವಾರ್ಡ್ ನಿಮಿತ್ತವಾಗಿ ನಿರ್ಮಾಣವಾಗುತ್ತಿರುವ ಮಿಶ್ರಭಾಷ ಚಲನಚಿತ್ರ PAN INDIA MOVIE

ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭ
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಅವಳು ಚಿತ್ರ ಮಹಿಳಾ ವಿಷಯಾಧಾರಿತ ಚಿತ್ರವಾಗಿದ್ದು ಚಿತ್ರದಲ್ಲಿ ನಾಯಕ ಪಾತ್ರ ಇಲ್ಲ..
ಚಿತ್ರದಲ್ಲಿ ಒಟ್ಟು ಐದು ನಾಯಕಿಯರಿದ್ದು ಹೊಸಬರನ್ನು ಚಿತ್ರಜಗತ್ತಿಗೆ ಪರಿಚಯಿಸಲು ಸಂಸ್ಥೆ ಆಲೋಚಿಸಿದೆ.
ಉಳಿದಂತೆ ಚಿತ್ರದಲ್ಲಿ ನಾಯಕಿಯರ ಕುಟುಂಬಸ್ಥರ ಪಾತ್ರಗಳು ಹಾಗೂ. ಮಕ್ಕಳ ಪಾತ್ರಗಳೂ ಇವೆ.
ಮೊದಲು ಚಿತ್ರವನ್ನು ಕನ್ನಡ ಭಾಷೆಯಲ್ಲಿ ನಿರ್ಮಿಸಿ ಬಿಡುಗಡೆಗೊಳಿಸಿ ನಂತರ ಚಿತ್ರವನ್ನು ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಿಗೆ ಡಬ್ ಮಾಡಿ ದೇಶಾದ್ಯಂತ ಬಿಡುಗಡೆಗೊಳಿಸುವ ಯೋಜನೆ ಸಂಸ್ಥೆಗಿದೆ.
ಅವಳು ಚಿತ್ರ ಮಹಿಳೆಯರ ಪರವಾದ ಚಿತ್ರವಾಗಿದ್ದು ಚಿತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿ ಹಂತದ ಪ್ರತಿಭೆಗಳಿಗೂ ಪ್ರಶಸ್ತಿ ಲಭಿಸಬೇಕು ಎಂಬ ಆಲೋಚನೆ ಸಂಸ್ಥೇಗಿದೆ.
ಚಿತ್ರದ ವಿಶೇಷವೆಂದರೆ ಇದು ಕೇವಲ ಸಂಪೂರ್ಣ ಮಹಿಳಾ ವಿಷಯಾಧಾರಿತ ಚಿತ್ರವಲ್ಲ ಬದಲಾಗಿ ಸಂಪೂರ್ಣ ಚಿತ್ರ ನಿರ್ಮಾಣದ ತಂತ್ರಜ್ಞ ಹಾಗೂ ಇತರೆ ಎಲ್ಲರೂ ಸಹ ಮಹಿಳೆಯನ್ನು ಹಾಕಿಕೊಂಡೆ ಮಾಡಲು ಹೊರಟ ವಿಶೇಷ ಚಿತ್ರವಾಗಿದೆ.
ಕೆಲವು ಪ್ರಮುಖ ಪುರುಷ ಪಾತ್ರಗಳು ಹೊರತು ಪಡಿಸಿದರೆ ಸಂಪೂರ್ಣ ಚಿತ್ರ ಮಹಿಳಾ ಸಾಮ್ರಾಜ್ಯವನ್ನು ಎತ್ತಿ ಹಿಡಿಯುತ್ತದೆ.
ಕಾರಭಾರಿ ಸಿನಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕಿ ಶ್ರೀಮತಿ ಮೇರಿ ರಾದೇ ಕಾರಭಾರಿ ರವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಅವಾರ್ಡ್ ನಿಮಿತ್ತವಾಗಿ ನಿರ್ಮಾವವಾಗುತ್ತಿರುವ ಚಿತ್ರ ಸಾಕಷ್ಟು ಅವಾರ್ಡುಗಳನ್ನು ಬಾಚಿಕೊಳ್ಳುವುದರಲ್ಲಿ ಸಂಶಯವಿಲ್ಲ

ಚಿತ್ರದಲ್ಲಿ ಅವಕಾಶ ಬಯಸುವ ಉತ್ಸಾಹಿಗಳು 7760433113 ಸಂಖ್ಯೆಗೆ ತಮ್ಮ ಭಾವಚಿತ್ರಗಳನ್ನು ಕಳುಹಿಸಬಹುದು.

Leave a Reply

Your email address will not be published. Required fields are marked *

error: Content is protected !!