ಅವಳು ಬಹುಭಾಷಾ ಚಲನಚಿತ್ರ ಚಿತ್ರಜಗತ್ತಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ

ಚಿತ್ರ ಜಗತ್ತಿನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಮರಿಚಿಕೆಯಾಗಿರುವ ಇಂತಹ ಪರಿಸ್ಥಿತಿಯಲ್ಲಿ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡುತ್ತಿದೆ ಉತ್ತರ ಕರ್ನಾಟಕ ಮೂಲದ ಕಾರಭಾರಿ ಚಿತ್ರ ಸಂಸ್ಥೆ.
ಹೊಸ ಪ್ರತಿಭೆಗಳಿಗೆ ನಿರ್ಮಾಪಕರ ಕೊರತೆ ಇರುವ ಇಂತಹ ಸಮಯದಲ್ಲಿ ನಿರ್ಮಾಪಕ ರಹಿತ ಚಿತ್ರ ನಿರ್ಮಾಣಕ್ಕೆ ಒಂದು ಸಂಸ್ಥೆ ಸ್ಥಾಪನೆಯಾದದ್ದು ಹೊಸ ಇತಿಹಾಸ, ಚಿತ್ರರಂಗದಲ್ಲಿ ಕೂ ಆಪರೇಟಿವ ಫಿಲ್ಮ್ ಸೊಸೈಟಿ ಸ್ಥಾಪನೆ ಮಾಡಿದ್ದು ಸಹ ಚಿತ್ರ ಇತಿಹಾಸದಲ್ಲಿ ಹೊಸ ಸಾಧನೆ. ಕೂ ಆಪರೇಟಿವ್ ಪದ್ದತಿಯಲ್ಲಿ ಸರಕಾರಿ ನಿಯಮಗಳ ಅನ್ವಯ ವಿವಿಧ ಮೂಲಗಳಿಂದ ಷೇರು ಸಂಗ್ರಹಿಸಿ ಕಲಾವಿದರನ್ನು ನೋಂದಣಿ ಮಾಡಿಕೊಂಡು ನೂರಾರು ಚಿತ್ರ ನಿರ್ಮಾಣದ ಜೊತೆಗೆ ಸಾವಿರಾರು ಪ್ರತಿಭೆಗಳನ್ನು ಪರಿಚಯಿಸಲು ಹೊರಟಿದೆ ಕಾರಭಾರಿ ಮೋಷನ್ಸ್ ಕೂ ಆಪರೇಷನ್ ಫಿಲ್ಮ್ ಚೇಂಬರ್,
ಸಂಸ್ಥೆ ಉತ್ತರ ಕರ್ನಾಟಕ ಭಾಗದ ಗದಗ ಮೂಲಕ ಸ್ಥಾಪನೆಯಾಗಿದ್ದು ಕಲಾವಿದರ ಪರವಾದ ಹೋರಾಟಕ್ಕಾಗಿ ರಾಜ್ಯಾದ್ಯಂತ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಿದೆ ಅಲ್ಲದೆ ಸಂಸ್ಥೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ದೇಶದ ಉಳಿದ ರಾಜ್ಯಗಳಲ್ಲಿಯೂ ತನ್ನ ತಂಡವನ್ನು ಸ್ಥಾಪಿಸುತ್ತಿರುವುದು ಚಿತ್ರ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲು.
ಪ್ರತಿಭೆಗಳ ಅನಾವರಣಕ್ಕೆ ನೋ ಕಾಂಪ್ರಮೈಸ್ ನೋ ಅಡ್ಜಸ್ಟ್ಮೆಂಟ್ ನಮ್ಮಲ್ಲಿ ಓನ್ಲಿ ಕಮಿಟ್ಮೆಂಟ್ ಪ್ರತಿಭೆ ಅನಾವರಣಕ್ಕೆ ನಿರ್ಮಾಪಕರು ಸಿಗುತ್ತಿಲ್ಲವೇ ಚಿಂತಿಸಬೇಡಿ ನಿಯಮಾನುಸಾರ ಕೂ ಆಪರೆಟಿವ ಫಿಲ್ಮ್ ಮೇಕಿಂಗ್ ಪದ್ದತಿಯನ್ನು ನಮ್ಮ ಸಂಸ್ಥೆ ಪರಿಚಯಿಸಿದೆ ದೇಶದಾದ್ಯಂತ ಹೊಸ ಪ್ರತಿಭೆಗಳಿಗೆ ಒಂದು ಅಮೋಘ ವೇದಿಕೆಯನ್ನು ಸಿದ್ದಮಾಡಿದ್ದೇವೆ. ನಮ್ಮ ಹೋರಾಟ ನಿರಂತರ ಆದರೆ ಗೆಲುವು ಶಾಶ್ವತ ಎಂದು ಹೇಳುತ್ತಾರೆ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ರಾ ದೇ ಕಾರಭಾರಿ.

ಸಂಸ್ಥೆಯ ಮೊದಲ ಚಿತ್ರ ಅವಳು ಬಹು ಭಾಷೆಯಲ್ಲಿ ನಿರ್ಮಾಣವಾಗುತ್ತಿದ್ದು ಇದನ್ನು ನಿರ್ದೇಶಿಸುತ್ತಿರುವ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಮೇರಿ ರಾದೇ ಕಾರಭಾರಿ ಚಿತ್ರ ಮಹಿಳಾ ಸಬಲೀಕರಣದ ಕುರಿತು ಇದ್ದು ಕೇವಲ ತೆರೆಯ ಮೇಲೆ ಸಬಲೀಕರಣ ತೋರಿಸದೆ ನೈಜ ಜೀವನದಲ್ಲೂ ಸಬಲೀಕರಣ ತೋರಿಸಬೇಕಿದೆ, ಚಿತ್ರದ ತಾಂತ್ರಿಕ ತಾಂತ್ರಿಕೇತರ ವಿಭಾಗಗಳಲ್ಲೂ ಬಹುತೇಕ ಮಹಿಳಾ ಶಕ್ತಿಯನ್ನು ಪರಿಚಯಿಸಲು ಶ್ರಮಿಸುತ್ತಿದೆ ಸಂಸ್ಥೆ, ಶ್ರಮಕ್ಕೆ ಪ್ರತಿಫಲ ನೀಡಲು ಮಹಿಳಾ ಶಕ್ತಿ ಕೇಂದ್ರಿಕರಣಗೊಳ್ಳುತ್ತಿದೆ ಚಿತ್ರ ಕಥೆ ಅದ್ಭುತವಾಗಿದೆ ಚಿತ್ರದಲ್ಲಿ ಐದು ನಾಯಕಿಯರು ಸೇರಿದಂತೆ ಬಹುತೇಕ ಪಾತ್ರಗಳನ್ನು ಹೊಸ ಕಲಾವಿದರು ನಿರ್ವಹಿಸಲಿದ್ದಾರೆ.
ಚಿತ್ರ ರಂಗದಲ್ಲಿ ಒಂದು ಹೊಸ ಇತಿಹಾಸವನ್ನು ನಿರ್ಮಿಸಲಿದೆ ಅವಳು ಬಹುಭಾಷಾ ಚಿತ್ರ, ಚಿತ್ರದಲ್ಲಿ ಐದು ಹಾಡುಗಳಿದ್ದು ಚಿತ್ರದ ಮ್ಯೂಸಿಕ್ ಅನ್ನು ಹತ್ತನೆಯ ತರಗತಿಯ ಬಾಲಕಿ ನಿರ್ದೇಶಿಸುತ್ತಿದ್ದು ಇದು ಚಿತ್ರ ಜಗತ್ತಿನ ಸಂಗೀತ ಲೋಕಕ್ಕೆ ಹತ್ತನೇ ತರಗತಿ ಬಾಲಕಿಯನ್ನು ಪರಿಚಯಿಸುತ್ತಿರುವುದು ಒಂದು ವಿಶೇಷ.

ಚಿತ್ರ ನಿರ್ಮಾನಕ್ಕೆ ರಾಜ್ಯದ ಹಾಗೂ ನೆರೆ ರಾಜ್ಯದ ಸಾಕಷ್ಟು ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದು, ತಾಂತ್ರಿಕ ತಾಂತ್ರಿಕೇತರ ವಿಭಾಗಕ್ಕೂ ಮಹಿಳಾ ಪ್ರತಿಭೆಗಳನ್ನು ಅಶ್ವಾನಿಸುತ್ತಿದ್ದೇವೆ ನಿಮ್ಮಲ್ಲಿ ಪ್ರತಿಭೆ ಇದ್ದರೆ ಅವಕಾಶ ನಮ್ಮಲ್ಲಿದೆ ನಮ್ಮನ್ನು ಸಂಪರ್ಕಿಸಿ ಎಂದು ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಮೇರಿ ರಾದೇ ಕಾರಭಾರಿ ಈ ಮೂಲಕ ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!