
ಕಾರಭಾರಿ ಚಲನಚಿತ್ರ ಸಂಸ್ಥೆ ನಿರ್ಮಿಸುತ್ತಿರುವ ಅವಳು ಬಹುಭಾಷಾ ಚಲನಚಿತ್ರ ಚಿತ್ರ ಜಗತ್ತಿನ ಮೊದಲಿನ ಸಾಲಿನಲ್ಲಿ ಕೂ ಆಪರೇಟಿವ್ ಪದ್ದತಿಯಲ್ಲಿ ಚಿತ್ರ ನಿರ್ಮಿಸುತ್ತಿದೆ ಅಲ್ಲದೆ ಹತ್ತನೆಯ ತರಗತಿಯ ಬಾಲಕಿ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಿಸುತ್ತಿದ್ದಾರೆ, ಮತ್ತೊಂದು ವಿಶೇಷ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಚಿತ್ರದ ಹಾಡಿಗೆ ಧ್ವನಿ ನೀಡಲಿದ್ದಾರೆ.
ಐದು ಹಾಡುಗಳಿರುವ ಚಿತ್ರ ಐದು ಮಹಿಳಾ ನಾಯಕಿಯರ ವಿಭಿನ್ನ ಕಥೆಗಳ ಒಂದು ಚಿತ್ರವಾಗಿದೆ.
ಮಾರ್ಚ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಂಡು ಮೇ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ. ಫೆಬ್ರುವರಿ 22 ರಂದು ಚಿತ್ರದ ಅಭಿನಯ ವಿಭಾಗಕ್ಕೆ ಆಯ್ಕೆಯಾದ ಹೊಸ ಕಲಾವಿದರ ಪೋಟೋ ಶೂಟ್ ಕಾರ್ಯಕ್ರಮವನ್ನು ಗದಗ ನಗರದಲ್ಲಿ ಹಮ್ಮಿಕೊಂಡಿದೆ.
ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದು ಗದಗ ನಗರದ ಚಿತ್ರ ಸಂಸ್ಥೆಯ ಕಾರ್ಯಾಲಯದಲ್ಲಿ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಸಂದರ್ಶನ ನಡೆಯುತ್ತಿದೆ.