
ಚಿತ್ರರಂಗದಲ್ಲಿ ಹೊಸ ಅಲೆಯನ್ನು ತರಲು ಉತ್ತರ ಕರ್ನಾಟಕದ ಮೂಲಕ ಸ್ಥಾಪನೆಯಾದ ಕಾರಭಾರಿ ಮೋಷನ್ಸ್ ಕೂ ಆಪರೇಷನ್ ಫಿಲ್ಮ್ ಚೇಂಬರ್ ಹಾಗೂ ಕಾರಭಾರಿ ಸಿನಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಅವಳು ಬಹುಭಾಷಾ ಚಲನಚಿತ್ರ ಇದರ ಅಭಿನಯ ವಿಭಾಗಕ್ಕೆ ಗದಗ ಮೂಲದ ಜಾಕಿರ್ ಹುಸೇನ್ ನಾಗನೂರ ಆಯ್ಕೆಯಾಗಿದ್ದಾರೆ
ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಹಾಗೂ ಅವಕಾಶ ವಂಚಿತ ಬಹುಮುಖ ಪ್ರತಿಭೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯಾದ್ಯಂತ ಕಲಾವಿದರ ನ್ಯಾಯದ ಹೋರಾಟಕ್ಕಾಗಿ ಸ್ಥಾಪನೆಯಾದ ಸಂಸ್ಥೆಯ ಮೊದಲ ಚಿತ್ರ ಅವಳು
ಭಾರತದ ಚಲನಚಿತ್ರ ಇತಿಹಾಸದಲ್ಲಿಯೇ ಕೆಲವು ಮೊದಲುಗಳ ಹೆಗ್ಗಳಿಕೆಗೆ ಪಾತ್ರವಾಗಲದೆ ಕಾರಭಾರಿ ಚಿತ್ರ ಸಂಸ್ಥೆ, ರಾಷ್ಟ್ರೀಯ ನೋಂದಣಿಯನ್ನು ಹೊಂದಿರುವ ಸಂಸ್ಥೆ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ತನ್ನ ಶಾಖೆಯನ್ನು ಆರಂಭಿಸುತ್ತಿದೆ.
ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿ ಕೂ ಆಪರೇಟಿವ್ ಚಿತ್ರ ನಿರ್ಮಾಣ ಪದ್ದತಿಯನ್ನು ಸಂಸ್ಥೆ ಪರಿಚಯಿಸುತ್ತಿರುವುದು ಕೂಡ ಚಿತ್ರರಂಗದಲ್ಲಿ ಒಂದು ನೂತನ ಇತಿಹಾಸ
ಚಿತ್ರ ಸಂಸ್ಥೆ ತನ್ನದೇ ಆದ ಚಿತ್ರೀಕರಣ ಘಟಕ ಹಾಗೂ ಮ್ಯೂಸಿಕ್ ಸ್ಟುಡಿಯೋ ಘಟಕವನ್ನು ಹೊಂದಿಗೆ, ಉತ್ತರ ಕರ್ನಾಟಕದ ಉತ್ಸಾಹಿ ಕಲಾವಿದರು, ರಾಜ್ಯದ ಅವಕಾಶ ವಂಚಿತರು, ಬಹುಮುಖ ಪ್ರತಿಭೆಗಳು, ಬಾಲ ಪ್ರತಿಭೆಗಳು ಇದರ ಸದುಪಯೋಗ ಪಡೆಯಬಹುದಾಗಿದೆ.
ಮಾರ್ಚ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಗೊಂಡು ಮೇ 2025 ರಂದು ಚಿತ್ರವನ್ನು ಮೊದಲ ಕನ್ನಡ ಭಾಷೆಯಲ್ಲಿ ಬಿಡುಗಡೆಗೊಳಿಸಿ ನಂತರ ಉಳಿದ ಭಾಷೆಗಳಿಗೆ ಭಾಶಾಂತರಗೊಳಿಸಲು ಸಂಸ್ಥೆ ಚಿಂತನೆ ನಡೆಸಿದೆ.
ಚಿತ್ರದಲ್ಲಿ ಅಭಿನಯ ಸೇರಿದಂತೆ ಇನ್ನಿತರ ಜವಾಬ್ದಾರಿಗಳನ್ನು ನಿಭಾಯಿಸಲು ಆಸಕ್ತ ಇರುವ ಪ್ರತಿಭೆಗಳು ನಮ್ಮನ್ನು ಸಂಪರ್ಕಿಸಬಹುದು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ರಾ ದೇ ಕಾರಭಾರಿ ಈ ಮೂಲಕ ಪ್ರಕಟಣೆ ನೀಡಿದ್ದಾರೆ
ಅವಳು ಚಲನಚಿತ್ರವನ್ನು ಶ್ರೀಮತಿ ಮೇರಿ ರಾ ದೇ ಕಾರಭಾರಿ ನಿರ್ದೇಶಿಸುತ್ತಿದ್ದಾರೆ ಹಾಗೂ ಚಿತ್ರ ನಿರ್ಮಾಣಕ್ಕೆ ಬಹುಪಾಲು ಮಹಿಳಾ ಶಕ್ತಿಯನ್ನು ಕೇಂದ್ರಿಕರಿಸಲಾಗಿದೆ.