ನಲವತ್ತು ಜನ ಕಲಾವಿದರು, ಮೂವತ್ತು ಜನ ಗೆಳೆಯರ ಕೂ ಆಪರೇಟಿವ್ ಫಿಲ್ಮ್ ಮಾದರಿಯಲ್ಲಿ ನಿರ್ಮಾಣದ ಚಿತ್ರ ಅವಳು ; ಚಿತ್ರದ ಸರ್ವ ಷೇರುದಾರರಿಗೆ ಕಾರಭಾರಿ ಅಭಿನಂದನೆಗಳು

ಉತ್ತರ ಕರ್ನಾಟಕದ ಕಲಾವಿದರು ಮೊದಲುಗೊಂಡು ರಾಜ್ಯಾದ್ಯಂತ ಅವಕಾಶ ವಂಚಿತ ಪ್ರತಿಭೆಗಳು, ಹೊಸ ಪ್ರತಿಭೆಗಳು, ಬಾಲ ಪ್ರತಿಭೆಗಳು ಇವರ ಷೇರು ಆಧಾರಿತ ಚಲನಚಿತ್ರ ಸಾಕಷ್ಟು ಹೋರಾಟಗಳ ಮದ್ಯ ಮಾರ್ಚ್ ಮೊದಲ ವಾರ ಚಿತ್ರೀಕರಣಗೊಳ್ಳಲಿದೆ.
ಅವಕಾಶ ವಂಚಿತ ಪ್ರತಿಭೆಗಳಿಗೆ, ಕನಸುಗಾರ ಪ್ರತಿಭೆಗಳಿಗೆ ನಿರ್ಮಾಪಕರು ಬವಣೆ ನೀಗಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಗದಗ ಮೂಲಕ ಸ್ಥಾಪನೆಯಾದ ರಾಷ್ಟ್ರೀಯ ಕೂ ಆಪರೇಟಿವ್ ಚಲನಚಿತ್ರ ಸಂಸ್ಥೆ, ಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನು ಹುಟ್ಟಿಸಿದೆ, ಕಾನೂನು ಬದ್ಧವಾಗಿ ಕೂ ಆಪರೇಟಿವ್ ಪದ್ದತಿಯಲ್ಲಿ ಸಿನಿಮಾ ನಿರ್ಮಿಸಬಹುದು ಎಂದು ಕಾರಭಾರಿ ಮೋಷನ್ಸ್ ಕೂ ಆಪರೇಟಿವ್ ಫಿಲ್ಮ್ ಚೇಂಬರ್ ಅಸೋಷಿಯೆಶನ್ ಸಾಬೀತು ಪಡಿಸಲಿದೆ.
ನಮಗೆ ನಿರ್ಮಾಪಕರ ಅಗತ್ಯವಿಲ್ಲ ಎಂದು ಸಾಬೀತು ಪಡಿಸಿದ ಸಂಸ್ಥೆ ತನ್ನ ಚೊಚ್ಚಲ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದೆ.
ಅವಳು ಚಿತ್ರ ತಂಡ ಯಶಸ್ಸಿನ ಹೊಸ್ತಿಲಲ್ಲಿ ನಿಂತಿದೆ ಅನ್ನುವುದರಲ್ಲಿ ಸಂದೇಹವಿಲ್ಲ.
ಕೂ ಆಪರೇಟಿವ್ ಫಿಲ್ಮ್ ಪದ್ದತಿಯಲ್ಲಿ ನಿರ್ಮಾಣದ ಚಿತ್ರ ಅವಳು ನಲವತ್ತು ಜನ ಕಲಾವಿದರು ಮೂವತ್ತು ಜನ ಗೆಳೆಯರನ್ನು ಶೇರುದಾರರಾಗಿ ಹೊಂದಿದೆ ಚಿತ್ರದ ಎಲ್ಲಾ ಷೇರುದಾರರಿಗೆ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ರಾ ದೇ ಕಾರಭಾರಿ ಅನಂತ ಧನ್ಯವಾದಗಳು ಈ ಮೂಲಕ ಸಲ್ಲಿಸಿದ್ದಾರೆ

ಎರಡೂವರೆ ಘಂಟೆಯ ಚಿತ್ರ ಕನ್ನಡದಲ್ಲಿ ಮೇ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಕಾಣಲಿದ್ದು ಕನ್ನಡದ ನಂತರ ಹಿಂದಿ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ಭಾಶಾಂತರಗೊಂಡು ದೇಶದಾದ್ಯಂತ ತೆರೆಕಾಣುವ ಸಂಕಲ್ಪ ಹೊಂದಿದೆ.
ಅವಳು ಚಿತ್ರದ ಐದು ಹಾಡುಗಳು ಸಂಗೀತ ಪ್ರಿಯರ ಹೃದಯ ಗೆಲ್ಲಲಿದೆ, ಐದು ನಾಯಕಿಯರ ವಿಭಿನ್ನ ಕಥೆಯ ಒಂದು ಚಿತ್ರ ಸಂಪೂರ್ಣ ಮಹಿಳಾ ಪಾರುಪತ್ಯವನ್ನು ಹೊಂದಿದೆ.
ಚಿತ್ರದ ನಿರ್ದೇಶಕಿ ಶ್ರೀಮತಿ ಮೇರಿ ರಾದೇ ಕಾರಭಾರಿ ರವರ ದಿಟ್ಟತನ ಚಿತ್ರ ನಿರ್ಮಾಣದಲ್ಲಿ ಎದ್ದು ಕಾಣಲಿದೆ ಅವಳು ಚಿತ್ರದ ಸ್ಪಾಟ್ ಗರ್ಲ್ಸ್ ಮೊದಲುಗೊಂಡು ಚಿತ್ರ ಸಂಪೂರ್ಣ ತಂಡ ಮಹಿಳಾ ಶಕ್ತಿಕೇಂದ್ರವಾಗಿರುವುದು ವಿಶೇಷ.
ಅವಳು ಚಿತ್ರದ ಹಾಡುಗಳಿಗೆ ಹತ್ತನೆಯ ತರಗತಿಯ ಬಾಲಕಿ ಸಂಗೀತ ನೀಡಿದರೆ ರಾ ದೇ ಕಾರಭಾರಿ ಯವರು ಬರೆದ ಹಾಡಿಗೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರೊಬ್ಬರು ಧ್ವನಿ ನೀಡಲಿದ್ದಾರೆ.
ಅವಾರ್ಡ್ ನಿಮಿತ್ತ ನಿರ್ಮಿಸುತ್ತಿರುವ ಚಿತ್ರ ರಾಜ್ಯಾದ್ಯಂತ ತೆರೆಕಂಡರೆ ಇತರೆ ಭಾಷೆಗಳಲ್ಲಿ ದೇಶಾದ್ಯಂತ ಸದ್ದು ಮಾಡಲಿದೆ.
ಚಿತ್ರದ ಕಲಾವಿದರ ಪೋಟೋ ಶೂಟ್ ಇದೆ ಫೆಬ್ರುವರಿ 22 ರಂದು ಗದಗ ನಗರದಲ್ಲಿ ಏರ್ಪಡಿಸಲಾಗಿದ್ದು ಚಿತ್ರೀಕರಣ ಮಾರ್ಚ್ ಮೊದಲ ವಾರ ಆರಂಭವಾಗಲಿದೆ.
ಚಿತ್ರದ ಪಾತ್ರಗಳಿಗೆ ಇನ್ನೂ ಆಡಿಷನ್ ನಡೆದಿದ್ದು ಆಸಕ್ತ ಕಲಾವಿದರು ಇದರ ಸದುಪಯೋಗ ಪಡೆಯಲು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ರಾ ದೇ ಕಾರಭಾರಿ ಈ ಮೂಲಕ ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!